ಸ್ವಯಂ ಉದ್ಯೋಗ ಯೋಜನೆಗಳು.

"ಚರ್ಮಶಿಲ್ಪ" ಯೋಜನೆ:
ಉದ್ದೇಶ :
ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಅಥವಾ ಕುಶಲಕರ್ಮಿಗಳ ಸ್ವ-ಸಹಾಯ ಸಂಘಗಳು/ ಸಹಕಾರ ಸಂಘಗಳು ಪಾರಂಪರಿಕ ವಿಧಾನದಲ್ಲಿ (Traditional Method) ಪಾದರಕ್ಷೆಗಳನ್ನು/ಚರ್ಮ ವಸ್ತಗಳನ್ನು ತಯಾರಿಸುತ್ತಿದ್ದಾರೆ. ಇವರು ಮುಂದೆ ಬಂದಲ್ಲಿ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಕೊಟ್ಟು ಸ್ವಯಂ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ವಿವರ:
ಘಟಕ ವೆಚ್ಚ :
ಘಟಕ ವೆಚ್ಚ :
ಕ್ರ.ಸಂ ವಿವರಗಳು ದರ (ರೂ. ಲಕ್ಷಗಳಲ್ಲಿ)
1 ಯಂತ್ರೋಪಕರಣಗಳು 3.50
2 ದುಡಿಮೆ ಬಂಡವಾಳ (ಕಚ್ಛಾಮಾಲು ಮತ್ತು ಲೇಬರ್ ಛಾರ್ಜಸ್) 6.00
3 ಇತರೆ ವೆಚ್ಚಗಳು 0.50
ಒಟ್ಟು 10.00
“ಕಾಯಕಸ್ಪೂರ್ತಿ” ಯೋಜನೆ
ಉದ್ದೇಶ :
ಮಹಿಳೆಯರಲ್ಲಿ ಉದ್ಯಮ ಶೀಲತೆ ಅಭಿವೃದ್ಧಿ ಪಡಿಸುವುದು, ಗುಂಪು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ತನ್ಮೂಲಕ ಆದಾಯ ಗಳಿಸಿ ಸ್ವಾವಲಂಬಿಗಳನ್ನಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ವಿವರ :
ಕಾಯಕಸ್ಪೂರ್ತಿ ಯೋಜನೆಯಡಿ ಕನಿಷ್ಟ 10 ತರಬೇತಿ ಪಡೆದ ಮಹಿಳೆಯರು ಸ್ವ-ಸಹಾಯ ಸಂಘ ರಚಿಸಿಕೊಂಡು ಚರ್ಮ ಕೈಗಾರಿಕೆಗೆ ಸಂಬಂಧಿಸಿದ ಗುಂಪು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತನ್ಮೂಲಕ ಆದಾಯ ಗಳಿಸಿ ಸ್ವಾವಲಂಬಿಗಳಾಗಲು ಮುಂದೆ ಬಂದಲ್ಲಿ ಪ್ರತಿ ಸಂಘಕ್ಕೆ ಆರ್ಥಿಕ ನೆರವು ಒದಗಿಸಲಾಗುವುದು.
ಘಟಕ ವೆಚ್ಚ :

ಪ್ರತಿ ಸಂಘಕ್ಕೆ ಗರಿಷ್ಟ ರೂ. 2,50 000 ಆರ್ಥಿಕ ನೆರವು ಒದಗಿಸಲಾಗುವುದು. ಇದರಲ್ಲಿ ರೂ. 1,50 000 ಸಹಾಯ ಧನ ಮತ್ತು ರೂ. 1,00 000 ಸಾಲದ ರೂಪದಲ್ಲಿ ನೀಡಲಾಗುವುದು. (ಪ್ರತಿ ಮಹಿಳಾ ಕುಶಲಕರ್ಮಿಗೆ ರೂ. 15,000/- ಸಹಾಯಧನ ಮತ್ತು ರೂ. 10,000/-ಸಾಲ)

“ಸ್ವಾವಲಂಬಿ / ಸಂಚಾರಿ” ಮಾರಾಟ ಮಳಿಗೆ ಯೋಜನೆ.
ಉದ್ದೇಶ :
ಚರ್ಮ ಕುಶಲಕರ್ಮಿ ಕುಟುಂಬದ ಅಕ್ಷರಸ್ಥ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.
ವಿವರ :
ಸಹಾಯಧನ:
ಫಲಾನುಭವಿಗಳು ಸ್ವಾವಲಂಬಿ/ ಸಂಚಾರಿ ಮಾರಾಟ ಮಳಿಗೆ ಪ್ರಾರಂಭಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಕೆಳಗಿನಂತೆ ಸಹಾಯಧನ ಒದಗಿಸಲಾಗುವುದು.
ಉಳಿದ ಮೊತ್ತ ಅಂದರೆ ಸಹಾಯಧನದಷ್ಟೆ ಅಥವಾ ಅದಕ್ಕಿಂತ ಮೇಲ್ಪಟ್ಟು ಬ್ಯಾಂಕ್ ಸಾಲ ಪಡೆದಿರಬೇಕು.
“ಪಾದುಕೆ ಕುಟೀರ” ಯೋಜನೆ
ಉದ್ದೇಶ :

ಈ ಯೋಜನೆಯಡಿ ಬೀದಿ ಬದಿ ಕುಳಿತು ಕಾಯಕ ನಿರ್ವಹಿಸುತ್ತಿರುವ ಚರ್ಮಕಾರರು ಸ್ಥಳೀಯ ಸಂಸ್ಥೆಗಳಿಂದ/ ಇತರೆ ಸಂಸ್ಥೆಗಳಿಂದ ಪರವಾನಗಿ ಪಡೆದು ಸಲ್ಲಿಸಿದಲ್ಲಿ ಗೌರವಯುತವಾಗಿ/ ಸುರಕ್ಷಿತವಾಗಿ ಕುಳಿತು ಕಾರ್ಯ ನಿರ್ವಹಿಸಲು ಅನುವಾಗುವಂತೆ ಪಾದುಕೆ ಕುಟೀರಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ವಿವರ:
ಘಟಕ ವೆಚ್ಚ :
ಕ್ರ.ಸಂ ವಿವರಗಳು ದರ (ರೂ. ಲಕ್ಷಗಳಲ್ಲಿ)
1ಯಂತ್ರೋಪಕರಣಗಳು3.50
2ದುಡಿಮೆ ಬಂಡವಾಳ
(ಕಚ್ಛಾಮಾಲು ಮತ್ತು ಲೇಬರ್ ಛಾರ್ಜಸ್)
6.00
3ಇತರೆ ವೆಚ್ಚಗಳು0.50
 ಒಟ್ಟು

10.00 

 
"ನೇರ ಸಾಲ" ಯೋಜನೆ
ಉದ್ದೇಶ :

ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಮನೆಗಳಲ್ಲಿ / ರಸ್ತೆ ಬದಿ ಕುಳಿತು ಕಾಯಕದಲ್ಲಿ ತೊಡಗಿರುವ ಮತ್ತು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿರುವ ಚರ್ಮ ಕುಶಲಕರ್ಮಿಗಳಿಗೆ ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಜೀವನೋಪಾಯಕ್ಕೆ ಅನುಕೂಲವಾಗುವಂತೆ ನಿಗಮದಿಂದ ನೇರ ಸಾಲ ಮತ್ತು ಸಹಾಯಧನ ಒದಗಿಸಿ ಸ್ವಯಂ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ವಿವರ:
"ಮಾರುಕಟ್ಟೆ ಸಹಾಯ" ಯೋಜನೆ
ಉದ್ದೇಶ :

ಕುಶಲಕರ್ಮಿಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ನಿಗಧಿಪಡಿಸಿ ಮಾರುಕಟ್ಟೆ ಸಹಾಯ ಒದಗಿಸುವ ಮೂಲಕ ನಿರಂತರ ಉದ್ಯೋಗ ಒದಗಿಸುವುದು ಮತ್ತು ಖಾಸಗಿ ಡೀಲರ್‍ಗಳ ಶೋಷಣೆಯಿಂದ ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.

ವಿವರ:

ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

ಸಾಮಾನ್ಯ ಅರ್ಹತೆಗಳು
ಸಲ್ಲಿಸಬೇಕಾದ ದಾಖಲಾತಿಗಳು
ಅನುಷ್ಟಾನ ವಿಧಾನ :