1. “ಸ್ವಾವಲಂಬಿ”ಮಾರಾಟ ಮಳಿಗೆ
ಉದ್ದೇಶ :
- ಚರ್ಮ ಕುಶಲಕರ್ಮಿ ಕುಟುಂಬದ ಅಕ್ಷರಸ್ಥ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.
ವಿವರಗಳು :
- ಚರ್ಮಕಾರರ ಸಮುದಾಯಕ್ಕೆ ಸೇರಿದ ಅಕ್ಷರಸ್ಥ, ನಿರುದ್ಯೋಗಿ, ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ವೈಯಕ್ತಿಕ/ಕುಶಲಕರ್ಮಿಗಳ ಸಹಕಾರ ಸಂಘ/ ಸ್ವ-ಸಹಾಯ ಸಂಘಗಳು ಈ ಯೋಜನೆರಡಿ ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ.
- ಪಾರಂಪರಿಕ ಚರ್ಮ ಕುಶಲಕರ್ಮಿಗಳು ಅವರು ತಯಾರಿಸಿದ ಚರ್ಮೋತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಮತ್ತು ವಿವಿಧ ಬ್ರಾಂಡ್ಗಳ ಪಾದರಕ್ಷೆ/ಶೂ ಮತ್ತು ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ವಂತ ಮಾರಾಟ ಮಳಿಗೆ ಪ್ರಾರಂಭಿಸಿ ಸ್ವಾವಲಂಬಿ ಜೀವನವನ್ನು ಕಲ್ಪಿಸಿಕೊಳ್ಳಬಹುದಾಗಿದೆ.
- ಈ ಚಟುವಟಿಕೆಗಳ ಮೂಲಕ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.
- ಮೇಲಿನ ಆರ್ಥಿಕ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಘಟಕ ವೆಚ್ಚದ ಆಧಾರದ ಮೇಲೆ ಗರಿಷ್ಠ ರೂ. 5.00 ಲಕ್ಷಗಳವರೆಗೂ ಸಹಾಯಧನ ನೀಡಲಾಗುವುದು.
ಘಟಕ ವೆಚ್ಚ :
ವಿವರ | ಅನುದಾನ |
---|---|
ಸ್ವ.ಉ.ಯೋ-1 | (ಘಟಕ ವೆಚ್ಚ ರೂ. 0 ಯಿಂದ – ರೂ. 5.00 ಲಕ್ಷದವರೆಗೆ ಶೇ. 70% ಅಥವಾ ಗರಿಷ್ಟ ರೂ. 3.50 ಲಕ್ಷ ಸಹಾಯಧನ. ಉಳಿದ ಮೊತ್ತ ಬ್ಯಾಂಕ್ ಸಾಲ) |
ಸ್ವ.ಉ.ಯೋ-2 | (ಘಟಕ ವೆಚ್ಚ ರೂ. 5.00 ಲಕ್ಷ ಮೇಲ್ಪಟ್ಟು– ಶೇ. 60 ರಷ್ಟು ಅಥವಾ ಗರಿಷ್ಟ ರೂ. 5.00 ಲಕ್ಷ ಸಹಾಯಧನ. ಉಳಿದ ಮೊತ್ತ ಬ್ಯಾಂಕ್ ಸಾಲ.) |