ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಹಾಯ ಒದಗಿಸುವ ಯೋಜನೆ
ಉದ್ದೇಶ :
ಕುಶಲಕರ್ಮಿಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ನಿಗಧಿಪಡಿಸಿ ಮಾರುಕಟ್ಟೆ ಸಹಾಯ ಒದಗಿಸುವ ಮೂಲಕ ನಿರಂತರ ಉದ್ಯೋಗ ಒದಗಿಸುವುದು ಮತ್ತು ಖಾಸಗಿ ಡೀಲರ್ಗಳ ಶೋಷಣೆಯಿಂದ ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ವಿವರ:
- ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಪ್ರತಿ ತಿಂಗಳಿಗೊಮ್ಮೆ / ಎರಡು ತಿಂಗಳಿಗೊಮ್ಮೆ ಲಿಡಕರ್ ಮಾರಾಟ ಮಳಿಗೆಗಳಲ್ಲಿ ಇರುವ ಬೇಡಿಕೆ ಆಧಾರದ ಮೇಲೆ ಖರೀದಿಸಿ ಲಿಡಕರ್ ಬ್ರಾಂಡ್ ಅಡಿ ಮಾರಾಟ ಮಾಡಿ ಮಾರುಕಟ್ಟೆ ಸಹಾಯ ಒದಗಿಸಲಾಗುವುದು, ತನ್ಮೂಲಕ ನಿರಂತರ ಸ್ವಯಂ ಉದ್ಯೋಗ ಕಲ್ಪಿಸಿಕೊಡಲಾಗುವುದು.
- ಒಬ್ಬ ಕುಶಲಕರ್ಮಿಯಿಂದ ಒಂದು ಬಾರಿಗೆ ರೂ. 50,000/- ದಿಂದ ರೂ. 1,00,000/- ದವರೆಗೆ ಖರೀದಿಸಲಾಗುವುದು.
- ಕುಶಲಕರ್ಮಿಗಳ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ರಿಯಾಯಿತಿ ಮಾರಾಟ ಘೋಷಿಸಲಾಗುವುದು.