ಲಿಡ್‍ಕರ್ ನಿಗಮದ ಮಾರುಕಟ್ಟೆ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸಿ ಲಾಭದಾಯಕ ಸಂಸ್ಥೆಯನ್ನಾಗಿ ಪರಿವರ್ತಿಸುವ ಸಂಬಂಧ ನಿಗಮದ ಪ್ರಸ್ತುತ ಸ್ಥಿತಿಗತಿ ಆದ್ಯಯನ ಮಾಡಿ ಶಿಫಾರಸ್ಸುಗಳೊಂದಿಗೆ ವರದಿ ಸಲ್ಲಿಸಲು ಸರ್ಕಾರದ ಅನುಮೋದನೆಯೊಂದಿಗೆ ಕಿಯೋನಿಕ್ಸ್ ಸಂಸ್ಥೆಯ ಮೂಲಕ ಕೆ.ಪಿ.ಎಂ.ಜಿ ಎಂಬ ತಜ್ಞ ಸಂಸ್ಥೆಯ ಸೇವೆಯನ್ನು ಪಡೆಯಲಾಗಿತ್ತು. ಸದರಿ ಸಂಸ್ಥೆಯು ಸೆಪ್ಟೆಂಬರ್ 2018 ರಿಂದ ಮಾರ್ಚ್ 2019 ರವರೆಗೆ ಅಧ್ಯಯನ ಮಾಡಿ ಹಲವು ಬಾರಿ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಪರಿಣಿತರನ್ನು ಒಳಗೊಂಡಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ನಿಗಮದ ಮಾನ್ಯ ಅಧ್ಯಕ್ಷರೊಡನೆ ಸಭೆ ನಡೆಸಿ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆದು ಪರಾಮರ್ಶಿಸಿದ ನಂತರ ಅಂತಿಮವಾಗಿ ಹಲವು ಶಿಪಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿರುತ್ತದೆ.
ಈ ವರದಿಯಲ್ಲಿ ಐದು ವರ್ಷಗಳ Transformation Roadmap ನೀಡಲಾಗಿದ್ದು, ಇದರ ಅನ್ವಯ ಕೆಳಕಂಡ ಅಂಶಗಳ ಮೇಲೆ ಕ್ರಮಕೈಗೊಳ್ಳಬೇಕಾಗಿರುತ್ತದೆ.
- Advisory Group Formation.
- Formation of new SBU.
- Product Line and Catalogue Revamp.
- Product Design and Development Overhaul.
- Sales Channel Optimization.
- Rebranding Lidkar.
- Artisan Community and Skill Enhancement.
- Business Process Design.
- Technology interventions for Business Operations.
- Associations and Partnership.
ಈ ಸಂಬಂಧ ಈಗಾಗಲೇ ಪ್ರಾರಂಭಿಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಮೊದಲನೆಯದಾಗಿ ಮಾನ್ಯ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಪರಿಣಿತರನ್ನೊಳಗೊಂಡ ಲಿಡ್‍ಕರ್ ಸಲಹಾ ಸಮಿತಿಯನ್ನು (Advisory Group) ರಚಿಸಲಾಗಿದೆ.
ಲಿಡ್‍ಕರ್ ಭವನದ ಎರಡನೆ ಮಹಡಿಯಲ್ಲಿ ಕೆಳಕಂಡ ಸೌಲಭ್ಯಗಳುಳ್ಳ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ.
- 1. ವಾಣಿಜ್ಯ ವಿಭಾಗದ ಮುಖ್ಯಸ್ಥರ ಮತ್ತು ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಛೇರಿ ವ್ಯವಸ್ಥೆ.
- 2. ಸಭೆ ಮತ್ತು ಕೌಶಲ್ಯ ವೃದ್ಧಿ ತರಬೇತಿ ನಡೆಸಲು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳುಳ್ಳ ಸುಸಜ್ಜಿತ ಸಭಾಂಗಣ.
- 3. ಡಿಸೈನ್ ಸ್ಟುಡಿಯೋ (ಪ್ರೋಡೆಕ್ಟ್ ಡಿಸೈನ್ ಅಂಡ್ ಡೆವಲಪ್ಮೆಂಟ್, ಸ್ಯಾಂಪಲ್ ಕಲೆಕ್ಷನ್, ತಾಂತ್ರಿಕ ಪರಿಶೀಲನೆ, ನ್ಯೂನತೆಗಳ ಸರಿಪಡಿಸುವಿಕೆ, ದರ ಲೆಕ್ಕಚಾರ, ಕರಕುಶಲ ಉತ್ಪನ್ನಗಳು ಮತ್ತು ಪ್ರೀಮಿಯಂ ಪ್ರೋಡೆಕ್ಟ್ಗಳನ್ನು ಗುರುತಿಸಿ ವಿಂಗಡಿಸುವುದು, ಸ್ಪೆಸಿಫಿಕೇಷನ್ ಸಿದ್ದಪಡಿಸುವುದು, ವಿನ್ಯಾಸಗಳು/ ಮಾದರಿಗಳ ಡಿಜಿಟಲೀಕರಣ, ಕೋಡಿಫಿಕೇಷನ್ ಮತ್ತು ಮಾರುಕಟ್ಟೆ ವಿಭಾಗಕ್ಕೆ ರವಾನೆ, ಇತ್ಯಾದಿ)
- 4. ಪ್ರೋಡೆಕ್ಟ್ ಡಿಸ್ಪ್ಲೆ ಯೂನಿಟ್ (ಡಿಸೈನ್ ಸ್ಟುಡಿಯೋ ಇಂದ ಅನುಮೋದಿತವಾಗಿ ಹೊರಬಂದ ಎಲ್ಲಾ ಉತ್ಪನ್ನಗಳ ಪ್ರದರ್ಶನ ಮತ್ತು ಪಾರಂಪರಿಕ ಉತ್ಪನ್ನಗಳ ಪ್ರದರ್ಶನ -ಸ್ಪೆಸಿಫಿಕೇಷನ್ ಕಾರ್ಡ್ನೊಂದಿಗೆ)
- 5. ಮಾಹಿತಿ ಕೇಂದ್ರ/ ಇನ್ಕ್ಯೂಬೇಷನ್ ಸೆಂಟರ್ (ಜಿ.ಐ. ಟ್ಯಾಗ್ ಮಾಹಿತಿ, ಸ್ಟಾರ್ಟ್ಆಪ್ಗಳಿಗೆ ಅವಶ್ಯವಿರುವ ಮಾಹಿತಿ, ಕಚ್ಚಾಮಾಲು ದೊರೆಯುವ ಮೂಲಗಳ ಮಾಹಿತಿ, ಚರ್ಮೋದ್ಯಮದಲ್ಲಿ ಇತ್ತೀಚಿನ ಬೆಳವಣಿಗೆಗಳ ಮತ್ತು ಸಂಶೋಧನೆಗಳ ಹಾಗೂ ಆಧುನಿಕ ತಾಂತ್ರಿಕತೆ ಬಗ್ಗೆ ಮಾಹಿತಿ, ಚರ್ಮೋದ್ಯಮಕ್ಕೆ ಅವಶ್ಯವಿರುವ ಯಂತ್ರೋಪಕರಣಗಳ ಮತ್ತು ದೊರೆಯುವ ಮೂಲಗಳ ಮಾಹಿತಿ, ಕರಕುಶಲ ಉತ್ಪನ್ನಗಳಿಗೆ ಬೇಡಿಕೆ ಇರುವ ವಿದೇಶ ಮಾರುಕಟ್ಟೆಗಳ ಬಗ್ಗೆ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರಿಯ ಲೆದರ್ ಮೇಳಗಳ ಬಗ್ಗೆ ಮಾಹಿತಿ ಇತ್ಯಾದಿ)