1. ಪಾದರಕ್ಷೆ/ ಶೂ/ ಚರ್ಮ ವಸ್ತುಗಳ ತಯಾರಿಕೆಯಲ್ಲಿ ಕೌಶಲ್ಯ ಅಭಿವೃದ್ದಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಶಿಬಿರ.
ಉದ್ದೇಶ :
ಪಾದರಕ್ಷೆ/ಶೂ/ಚರ್ಮ ವಸ್ತುಗಳ ತಯಾರಿಕೆಯಲ್ಲಿ ಕೌಶಲ್ಯ ಅಭಿವೃದ್ಧಿಗೊಳಿಸುವುದು ಮತ್ತು ಗುಡಿ ಕೈಗಾರಿಕೆಗೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ವಿವರಗಳು :
- ಪಾದರಕ್ಷೆ/ ಶೂ / ಚರ್ಮ ವಸ್ತುಗಳ ತಯಾರಿಕೆಯಲ್ಲಿ 60 ದಿನಗಳ ಅವಧಿಗೆ ಉನ್ನತ ಮಟ್ಟದ ಕೌಶಲ್ಯ ಅಭಿವೃದ್ದಿ ತರಬೇತಿ ನೀಡಲಾಗುವುದು.
- ಕರ್ನಾಟಕ ಚರ್ಮ ತಾಂತ್ರಿಕ ಸಂಸ್ಥೆಯ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಿಂದ ಪರಿಷ್ಕøತ ಪಠ್ಯದ ಆಧಾರದ ಮೇಲೆ ಬಹುಪಯೋಗಿ ತರಬೇತಿಯನ್ನು ನೀಡಲಾಗುವುದು.
- ತರಬೇತಿ ನಂತರ ಗುಡಿಕೈಗಾರಿಕೆ ಪ್ರಾರಂಭಿಸಲು ಅವಶ್ಯವಿರುವ ಅಂದಾಜು ರೂ.22,000/- ಬೆಲೆ ಬಾಳುವ ಯಂತ್ರೋಪಕರಣಗಳನ್ನು ಅಂದರೆ ಒಂದು ಚರ್ಮ ಹೊಲಿಗೆ ಯಂತ್ರ ಮತ್ತು ಒಂದು ಉಪಕರಣ ಪೆಟ್ಟಿಗೆ ವಿತರಿಸಲಾಗುವುದು. ಅಲ್ಲದೆ ರೂ. 6,000/- ಶಿಷ್ಯವೇತನ ನೀಡಲಾಗುವುದು.
- ಉದ್ಧೇಶಿತ ಗುಂಪು - 30 ಕುಶಲಕರ್ಮಿಗಳ ಒಂದು ತಂಡ